ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಯುವ ಸಮುದಾಯ ಡ್ರಗ್ಸ್ ಗಾಂಜಾ ಸೇವನೆಯಿಂದ ಇಡೀ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆ ಕೂಡ ಹಲವಾರು ಬಾರಿ ಜಾಗೃತಿ ಕೂಡ ಮೂಡಿಸಿದ್ದು. ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು ಬಂದ ಹಿನಲ್ಲೆ ಡ್ರಗ್ಸ್, ಗಾಂಜಾ ಪೆಡ್ಲರ್ ವ್ಯಸನಿಗಳ ಪರೇಡ್ ನಡೆಸಿದರು. ಎನ್. ಶಶಿಕುಮಾರ್ ಅವರು ಕಮಿಷನರ್ ಆಗಿ ಅವಳಿ ನಗರಕ್ಕೆ ಬಂದ ತಕ್ಷಣ ಮೊದಲಿಗೆ ಗಾಂಜಾ, ಡ್ರಗ್ಸ್ ಪೆಡ್ಲರ್‌ಗಳನ್ನೇ ಟಾರ್ಗೆಟ್ ಮಾಡಿ ಹತೋಟಿಗೆ ತಂದಿದ್ದರು. ಈಗ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳು ಬಂದ ಹಿನ್ನೆಲೆಯಲ್ಲಿ, ಇಂದು ಕಮಿಷನರ್ ಅವರು ಗಾಂಜಾ, ಡ್ರಗ್ಸ್ ಪೆಡ್ಲರ್‌ಗಳ ಪರೇಡ್ ಮಾಡಿ ಗಣಪತಿ ಹಬ್ಬದ ವೇಳೆ ಶಾಂತಿ ಭಂಗ ಆಗದಂತೆ ಖಡಕ್ ಎಚ್ಚರಿಕೆ ನೀಡಿದರು.