ನಂಜನಗೂಡಿನ ಕಪಿಲಾ ನದಿ ಜಾಗಕ್ಕೆ ಮಣ್ಣು ತುಂಬಿ ಒತ್ತುವರಿ ಹಾಗೂ ಸ್ಮಶಾನ ಜಾಗ ಒತ್ತುವರಿ ಮಾಡಿ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿ ಚಾಮಲಾಪುರ ಹುಂಡಿ ಗ್ರಾಮಸ್ಥರು ದಿಡೀರ್ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಯಾರೆ ಸತ್ತರೂ ಹೂಳಲು ಮೀಸಲಿದ್ದ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿದ್ದಲ್ಲದೆ, ಕಪಿಲಾ ನದಿಯ ಒಂದು ಭಾಗಕ್ಕೆ ಮಣ್ಣು ಹಾಕಿ ಒತ್ತುವರಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೊಂದರೆ ಅಗುತ್ತಿದೆ. ಈಗಾಗಲೇ ಎರಡು ತಿಂಗಳ ಹಿಂದೆ ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಗ್ರಾಮದಲ್ಲಿ ಮುಂದೆ ಯಾರೇ ಸತ್ತರೂ ತಾಲೂಕು ಕಚೇರಿ ಮುಂದೆ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.