ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ವಳಗೆರೆಪುರ ಗ್ರಾಮದ ರೈತರೊಬ್ಬರ ಗದ್ದೆಯಲ್ಲಿ ಶಾಸಕ ಡಾ. ರಂಗನಾಥ್ ಮಂಗಳವಾರ ಬೆಳಿಗ್ಗೆ 10 ಗಂಟೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ತಮ್ಮ ಕೃಷಿ ಪ್ರೇಮವನ್ನು ಪ್ರದರ್ಶಿಸಿದರು. ಇದು ಎರಡನೇ ವರ್ಷ ತಾನು ಭತ್ತ ನಾಟಿ ಮಾಡುತ್ತಿರುವುದಾಗಿ ತಿಳಿಸಿದ ಅವರು, ರೈತರೊಂದಿಗೆ ಕಾಲ ಕಳೆಯುವುದೇ ಒಂದು ಸ್ವರ್ಗವೆಂದೂ, ಅವರೊಂದಿಗೆ ದಿನವಿಡೀ ಭತ್ತ ನಾಟಿ ಮಾಡಿ ಸಂತಸ ವ್ಯಕ್ತಪಡಿಸಿದರು.....