ಮಡಿಕೇರಿ ಕೊಡವ ಸಮಾಜದ ವತಿಯಿಂದ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ಕೈಲ್ ಪೊಳ್ಡ್ ಅಚರಣೆಯನ್ನು ಮಾಡಲಾಯಿತು. ಸಮಾಜದ ಅಧ್ಯಕ್ಷರಾದ ಮಂಡುವಂಡ ಪಿ. ಮುತ್ತಪ್ಪ ನವರು ಅಯುದ್ದ ಪೂಜೆಸಲ್ಲಿಸಿದರು. ವೀರ ಪರಂಪರೆಯ ನಾಡಿಯಲ್ಲಿ ಆಯುದ್ದ ಪೂಜೆಯ ಸಂಪ್ರದಾಯಕ್ಕೆ ವಿಶೇಷ ಆದ್ಯತೆ ಇದ್ದು ಸೆಪ್ಟಂಬರ್ ಮೂರರಂದು ಹೆಚ್ಚಿನೆಡೆ ಕೈಲ್ ಪೊಳ್ದ್ ನಮ್ಮೆಯನ್ನು ಆಚರಿಸಲಾಗಿದೆ. ಸಮಾಜದ ವತಿಯಿಂದ ಪ್ರತಿವರ್ಷದಂತೆ ಈವರ್ಷವೂ ನಮ್ಮೆಯನ್ನು ಮಾಡಲಾಗುತಿದೆಂದರು.ಕೋವಿ ಒಡಿಕತ್ತಿಯನ್ನು ನೀಡುವ ಮೂಲಕ ಎಲ್ಲರಿಗೂ ಒಳಿತನ್ನು ಮಾಡಲೆಂದು ಬೇಡಿ ಕೊಂಡರು ಸಮಾಜದ ನಿರ್ದೇಶಕರು ಹಾಗು ಸಿಬಂದಿ ವರ್ಗದ ಪುರುಷರು ಹಾಗು ಮಹಿಳೆಯರು ತೆಂಗಿನ ಕಾಯಿಗೆ ಗುಂಡು ಹೊಡೆದರು. ನಂತರ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿ ವಿಜೇತರೀಗೆ ಬಹುಮಾನ ನೀಡಲಾಯಿತು.