ಸಂಡೂರುತಾಲೂಕಿನ ವಡ್ಡು ಗ್ರಾಮದ ಬಳಿಯಲ್ಲಿ ಬುಧವಾರ ರಾತ್ರಿ 11:50ಕ್ಕೆಬೈಕ್ ಸ್ಕಿಡ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್‌ನಲ್ಲಿದ್ದ ಕುರೆಕುಪ್ಪ ಗ್ರಾಮದ ತ್ರಿವಿಕ್ರಮ (19) ಹಾಗೂ ತೋರಣಗಲ್ಲು ಗ್ರಾಮದ ರವಿತೇಜ (19) ಸ್ಥಳದಲ್ಲಿಯೇ ಮೃತಪಟ್ಟಿ ದ್ದಾರೆ. ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ ಕುರಿಕುಪ್ಪ ಗ್ರಾಮದಬಸವನಗೌಡ (19)ನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆಎಂದು ಪೋಲಿಸರು ಗುರುವಾರ ರಾತ್ರಿ 7:30ಕ್ಕೆ ಮಾಹಿತಿ ನೀಡಿದ್ದಾರೆ.