ಈ ಭಾಗದಲ್ಲಿ ಮಳೆಯ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಜೂನ್ ಮತ್ತು ಜುಲೈನಲ್ಲಿ ಈ ಭಾಗದಲ್ಲಿ ಸುರಿದಿರುವ ಮಳೆಯ ಪ್ರಮಾಣ ಗಮನಿಸಿದರೆ ವಾಡಿಕೆಗಿಂತ ಮೂರು ಪಟ್ಟು ಜಾಸ್ತಿ ಆಗುತ್ತಿದೆ ಎನ್ನುವ ಮಹತ್ವದ ವರದಿಯನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಸರ್ಕಾರದ ಗಮನಕ್ಕೆ ತಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕಳೆದ ಶುಕ್ರವಾರ ಸರ್ಕಾರದ ಗಮನಕ್ಕೆ ತಂದಿರುವ ಅಂಶ ಹೊರ ಬಿದ್ದಿದೆ. ಕಡಿದಾದ ಇಳಿಜಾರು ಪ್ರದೇಶವೇ ಹೆಚ್ಚಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗಿ ನೆಲಕ್ಕೆ ಒತ್ತಡ ಹೆಚ್ಚಾದಷ್ಟು ಭೂಕುಸಿತ ಹೆಚ್ಚಾಗಲಿದೆ ಎಂದು ಜಿಎನ್ಎ ವರದಿ ಹೇಳಿದೆ. ಈ ಎಲ್ಲ ಕಾರಣಗಳಿಂದ ಕೆಲ ನಿಯಂತ್ರಣ ಅನಿವಾರ್ಯ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದ್ದು ಈ ಬಗ್ಗೆ ಸರಕಾರಕ್ಕೂ ವರದಿ ನೀಡಿದೆ. ಅಷ್ಟೇ ಅಲ್ಲದೆ ಗಿರಿ ಭಾಗದಲ್ಲಿ ಕಳೆದ ಐದು ವರ್ಷಗ