ಭಾದ್ರಪದ ಮಾಸದ ಶ್ರಾವಣ ಶುದ್ಧ ತೃತೀಯೆ ದಿನವಾದ ಇಂದು ಹರತಾಳಿಕ ಪೂಜೆ ನೇರವೇರಿಸಲಾಯಿತು. ಕಲಬುರಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ಮಹಿಳೆಯರು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದಲೇ ನೀರು ಸಹ ಸೇವಿಸದೆ ನಿರಾಂಕಾರವಾಗಿ ಮಹಿಳೆಯರು ಮನೆ ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಹರತಾಳಿಕ ಪೂಜೆ ಮಾಡಿ ಆರಾಧನೆ ಸಲ್ಲಿಸಿದರು. ಮನೆಯಲ್ಲಿ ಉಸುಕಿನಿಂದ ಲಿಂಗ ತಯಾರಿಸಿ, ಕಾಡಿನಲ್ಲಿ ಸಿಗುವ ಹೂವು ಹಣ್ಣು ಕಾಯಿ ಬಳಕೆ ಮಾಡಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.. ಮದುವೆಯಾದ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ, ಯುವತಿಯರು ಸದ್ಗುಣ ಸಂಪನ್ನ ಪತಿಗಾಗಿ ವ್ರತ ಕೈಗೊಳ್ಳುತ್ತಾರೆಂದು ಮಂಗಳವಾರ 8 ಗಂಟೆಗೆ ಶಿವನ ಆರಾಧಕಿ ಸರೀತಾ ಅವರು ತಿಳಿಸಿದ್ದಾರೆ..