ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಂಧ್ರಾಳ್ ಗ್ರಾಮದ ದೇವಸ್ಥಾನದ ಹತ್ತಿರ ಸುಮಾರು 50-55 ವರ್ಷದ ವಯಸ್ಸಿನ ಅನಾಮಧೇಯ ವ್ಯಕ್ತಿಯು ಅಸ್ವಸ್ಥನಾಗಿ ಬಿದ್ದು, ಬಿಎಂಸಿಆರ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ವಾರಸುದಾರರ ಬಗ್ಗೆ ಮಾಹಿತಿ ಇರುವುದಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಸೋಮವಾರ ಸಂಜೆ 4ಗಂಟೆಗೆ ಕೋರಿದ್ದಾರೆ. ಚಹರೆ ಗುರುತು: ಅಂದಾಜು 5.6 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಕಪ್ಪು ಮಿಶ್ರಿತ ಬಿಳಿ ಕೂದಲು ಮತ್ತು ಗಡ್ಡ ಹೊಂದಿರುತ್ತಾನೆ. ಮಾಸಿದ ಕಪ್ಪು ಮತ್ತು ಬಿಳಿ ಬಣ್ಣದ ಮಿಶ್ರಿತ ಅಂಗಿ, ಕಪ್ಪು ನೀಲಿ ಬಣ್ಣದ ಗೆರೆಗಳುಳ್ಳ ಲುಂಗಿ ಮತ್ತು ನೇರಳೆ ಬಣ್ಣದ ಒಳಉಡುಪು ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ