ಮಧುಗಿರಿ ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಬುಧವಾರ ಮಧ್ಯಾಹ್ನ ಕಳ್ಳತನದ ಘಟನೆ ನಡೆದಿದೆ. ಬಂದ್ರೇಹಳ್ಳಿಯ ನಿವೃತ್ತ ಶಿಕ್ಷಕ ಗಂಗಪ್ಪ ತಮ್ಮ ಮಗನ ಮದುವೆ ಖರ್ಚಿಗೆ ತಂದಿದ್ದ 1.75 ಲಕ್ಷ ರೂ. ಹಣವನ್ನು ಬ್ಯಾಂಕ್‌ನಲ್ಲಿ ಕಟ್ಟಲು ನಿಂತಿದ್ದ ವೇಳೆ, ದುಷ್ಕರ್ಮಿಗಳು ಬ್ಲೇಡ್ ಮೂಲಕ ಪ್ಲಾಸ್ಟಿಕ್ ಕವರ್ ಕತ್ತರಿಸಿ ಕದ್ದಿದ್ದಾರೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಶನಿವಾರ ಪಬ್ಲಿಕ್ ನ್ಯೂಸ್ ಗೆ ದೃಶ್ಯ ಲಭಿಸಿದೆ, ಮಧುಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.