ತುಮಕೂರು ನಗರದ ಸಪ್ತಗಿರಿ ಬಡಾವಣೆಯಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಲ್ಲಿ, ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಪತ್ನಿ ಪ್ರೇರಣಾ ಅವರು ತಮ್ಮ ಪತಿ ಪ್ರಜ್ವಲ್ ಶಂಕರ್ ಮನೆ ಮುಂದೆ ಧರಣಿ ನಡೆಸಿದ್ದಾರೆ. 2024ರಲ್ಲಿ ವಿಜಯಶಂಕರ್ ಅವರನ್ನು ವಿವಾಹವಾಗಿದ್ದ ಪ್ರೇರಣಾ ಅವರು, ಮದುವೆಯಾದ 4 ತಿಂಗಳಲ್ಲೇ ಗಂಡ, ಅತ್ತೆ, ಮಾವ ಮತ್ತು ನಾದಿನಿ ಸೇರಿ ನಾಲ್ವರು ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಪತಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.