ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರಾ ಸಮುದಾಯಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಮಾಜಿ ಸಂಸದ ಉಮೇಶ ಜಾಧವ್ ಆರೋಪಿಸಿದರು. ಸೆಪ್ಟೆಂಬರ್ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಕಮಲಾಪುರದಲ್ಲಿ ಗುರುವಾರ 6 ಗಂಟೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.. ಬಂಜಾರರನ್ನು ಜನಗಣತಿಯಲ್ಲಿ ಕಡಿಮೆ ಎಂದು ತೋರಿಸಿ ಮೀಸಲಾತಿ ಹಂಚಿಕೆ ಮಾಡಿರುವುದು ಅನ್ಯಾಯಕರ ಕ್ರಮವಾಗಿದ್ದು, ಸರ್ಕಾರ ಹೊರಡಿಸಿರುವ ವರದಿ ಕೈಬಿಡಬೇಕೆಂದು ಆಗ್ರಹಿಸಿದರು.