ಆಗಸ್ಟ್ 23 ಸಂಜೆ 4:00 ಗಂಟೆಯ ಸುಮಾರಿಗೆ ಮಹಿಳೆ ಒಬ್ಬಳು ಬಸ್ ಹತ್ತುವಂತಹ ಸಂದರ್ಭದಲ್ಲಿ ಬಿಎಂಟಿಸಿ ಚಾಲಕ ಮಹಿಳೆಯ ಕೈಯನ್ನು ಬಾಗಿಲಲ್ಲಿ ಲಾಕ್ ಮಾಡಿರುವಂತಹ ಘಟನೆ ನಡೆದಿದೆ. ಒಂದಷ್ಟು ಜನ ಮಹಿಳೆಯರು ಬಸ್ ಹತ್ತುತ್ತಿರುತ್ತಾರೆ. ಆ ಸಂದರ್ಭದಲ್ಲಿ ಓರ್ವ ಮಹಿಳೆಗೆ ಮೆಟ್ಟಿಲು ಹತ್ತಲು ಸಾಧ್ಯ ಆಗಲ್ಲ. ಮಹಿಳೆಯ ಜೊತೆಗೆ ಲೇಡಿ ಕಂಡಕ್ಟರ್ ಕೂಡ ಇರುತ್ತಾರೆ. ಹೀಗಿದ್ದರು ರು ಮಹಿಳೆಯ ಕೈ ಡೋರ್ ಒಳಗಡೆ ಲಾಕ್ ಆಗಿದ್ದರು ಬಸ್ ಮೂವ್ ಆಗುತ್ತೆ. ಸ್ವಲ್ಪ ದೂರ ಮಹಿಳೆಯನ್ನ ಬಸ್ ಎಳೆದು ಕೊಂಡು ಹೋಗುತ್ತೆ. ಬಿಎಂಟಿಸಿ ಚಾಲಕನ ಅಜಾಗರೂಕತೆಗೆ ವ್ಯಾಪಕ ಟೀಕೆ ವ್ಯಕ್ತ ಆಗಿದೆ.