ಕೆಲಸ ಮಾಡುತ್ತಿದ್ದ ಅಂಗಡಿಯನ್ನೇ ದೋಚಿದ್ದ ಕಳ್ಳನನ್ನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಜಸ್ತಾನ ಮೂಲದ ನಿತಿನ್ ಸೋನಿ ಬಂಧಿತ ಆರೋಪಿಯಾಗಿದ್ದು, ಆತನಿಂದ 36 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 23ರಂದು ಮಧ್ಯಾಹ್ನ 1 ಗಂಟೆಗೆ ಮಾಹಿತಿ ನೀಡಿದ ಪೊಲೀಸರು, ಚಿನ್ನದಂಗಡಿಯೊಂದರಲ್ಲಿ ಕುಸುರಿ ಕೆಲಸ ಮಾಡಿಕೊಂಡಿದ್ದ ಆರೋಪಿ, ಮಾಲೀಕ ಇರದಿದ್ದಾಗ ಕಳ್ಳತನ ಮಾಡಿದ್ದ.ನಂತರ ಗೋವಾ, ಮುಂಬೈನಲ್ಲಿ ಸುತ್ತಾಡಿದ್ದ" ಎಂದು ವಿವರಿಸಿದರು.