ಹಾಸನ: ಚಾಮುಂಡೇಶ್ವರಿಯನ್ನು ತಾಯಿ, ದೇವಿಯಾಗಿ ಒಪ್ಪಿ ಭಕ್ತಿಯಿಂದ ಉದ್ಘಾಟನೆಗೆ “ಹೋದರೆ ನಮಗೆ ತಕರಾರು ಇಲ್ಲ ಆದರೆ ಸಂಪ್ರದಾಯವನ್ನು ನಿರ್ಲಕ್ಷಿಸಿ ಮಾಡುವ ಯಾವುದೇ ಕ್ರಮವನ್ನು ಹಿಂದು ಸಮಾಜ ಒಪ್ಪುವುದಿಲ್ಲ," ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಸ್ಪಷ್ಟಪಡಿಸಿದರು.ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಭಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವ ಬಗ್ಗೆ ನಮ್ಮ ತಕರಾರಿಲ್ಲ, ಈ ಬಗ್ಗೆ ಇತರರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ನನ್ನ ನಿಲುವು ಸ್ಪಷ್ಟವಾಗಿದೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಕೂಡ ಆಗಿದೆ ಎಂದರು.ಹಿಂದೂ ಧರ್ಮದ ಮೇಲೆ ನಂಬಿಕೆ ಹಾಗೂ ಪ್ರೀತಿ ಇಟ್ಟು ದಸರಾ ಉದ್ಘಾಟನೆ ಮಾಡುವ ಮನಸ್ಥಿತಿಯನ್ನು ತಾಯಿ ಚಾಮುಂಡೇಶ್ವರಿ ಕೊಡಲಿ ಎಂದರು.