ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಮತ್ತು ದತ್ತಪೀಠಕ್ಕೆ ಇಂದು ಹಾಗೂ ನಾಳೆ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಮಂಗಳವಾರ ಎಂಟು ಗಂಟೆ ಸುಮಾರಿಗೆ ಮನವಿ ಮಾಡಿದೆ. ಸ್ಥಳೀಯವಾಗಿ ಶತಮಾನಗಳಿಂದ ನಡೆದುಬರುತ್ತಿರುವ ಚೌತಿ ಕಾಯಿ ಹೊಡೆದು ಹಣ್ಣು ಕಾಯಿ ಮಾಡುವ ಪಾರಂಪರಿಕ ಆಚರಣೆ ಹಬ್ಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ನಡೆಯುವ ಈ ವಿಶೇಷ ಸಂಪ್ರದಾಯದಲ್ಲಿ 40ಕ್ಕೂ ಹೆಚ್ಚು ಗ್ರಾಮಗಳ ಜನರು ಭಾಗವಹಿಸುತ್ತಾರೆ. ಕಸಬಾ, ವಸ್ತಾರೆ ಮತ್ತು ಜಾಗರಮೂರು ಹೋಬಳಿಗಳ ಗ್ರಾಮಸ್ಥರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಗುರು ನಾರಕಂತಿಮಠದಲ್ಲಿ ಜಮಾಯಿಸಿ ಪರಂಪರೆಯನ್ನು ಮುಂದುವರಿಸುತ್ತಾರೆ.