ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷ ಉಪಾಧ್ಯಕ್ಷರು ಚುನಾವಣೆ ಅಗಸ್ಟ ೨೬ ರಂದು ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಜೈನಸಾಬ ಕಾಶೀಮಸಾಹ ಹಗೇದಾಳ ನಾಮಪತ್ರವನ್ನು ಸಲ್ಲಿಸಿದರು. ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ದೊಡ್ಡಪ್ಪ ಶರಣಪ್ಪ ದಂಡಿನ ನಾಮಪತ್ರವನ್ನು ಸಲ್ಲಿಸಿದರು. ಎರಡು ಸ್ಥಾನಗಳಿಗೆ ಎರಡೇ ನಾಮಪತ್ರಗಳನ್ನು ಸಲ್ಲಿಸಿದ ಕಾರಣ ಅಧ್ಯಕ್ಷ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಮುರಳೀಧರ ದೇಶಪಾಂಡೆ ಮಧ್ಯಾಹ್ನ ೩ ಗಂಟೆಗೆ ತಿಳಿಸಿದ್ದಾರೆ. ನೂತನ ಅಧ್ಯಕ್ಷ ಉಪಾಧ್ಯಕ್ಷರು ನಿರ್ದೇಶಕರು ಮತ್ತು ಚುನಾವಣಾಧಿಕಾರಿಗಳು ಹಾಗೂ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.