ರಾಮನಗರ - ಇತ್ತೀಚೆಗೆ ಬೆಳಕಿಗೆ ಬಂದ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರೂಣ ಪತ್ತೆ ಪ್ರಕರಣವನ್ನು ಸಿಐಡಿ ಗೆ ಒಪ್ಪಿಸುವಂತೆ ವಿಮೋಜ ಸಂಘಟನೆಯ ಜನಾರ್ದನ ನಗರದಲ್ಲಿ ಬಾನುವಾರ ಒತ್ತಾಯಿಸಿದರು. ಜಿಲ್ಲಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಭ್ರೂಣ ಪತ್ತೆ ಮಾಡಿರುವುದನ್ನು ಪತ್ತೆಹಚ್ಚಿರುವ ಜಿಲ್ಲಾ ಆರೋಗ್ಯ ಇಲಾಖೆ ಅಭಿನಂದನೆಗೆ ಅರ್ಹವಾಗಿದೆ. ಅದರೆ ಭ್ರೂಣ ಪತ್ತೆ ಹಾಗೂ ಹತ್ಯೆಯಲ್ಲಿ ಭಾಗಿಯಾಗಿರುವ ಸಂಪೂರ್ಣ ತಂಡವನ್ನು ಪತ್ತೆ ಮಾಡಿ, ಶಿಕ್ಷೆಗೆ ಗುರಿ ಪಡಿಸಬೇಕು. ಮಂಡ್ಯದ ಅಲೆಮನೆಯಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ತ್ವರಿತವಾಗಿ ಉನ್ನತ ಮಟ್ಟದ ತನಿಖೆ ವಹಿಸಿದ ಮಾದರಿಯಲ್ಲಿ ಸರ್ಕಾರ ಈ ಪ್ರಕರ