ತಾಲ್ಲೂಕಿನ ಜಡೇಕುಂಟೆ ಗ್ರಾಮದಲ್ಲಿ ಸೋಮವಾರ ರಸ್ತೆ ಒತ್ತುವರಿ ಜಾಗವನ್ನುತಹಶೀಲ್ದಾರ್ ರೇಹಾನ್ ಪಾಷಾ ತೆರವು ಮಾಡಿಸಿದ್ದಾರೆ. ಜಡೆಕುಂಟೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಗ್ರಾಮದಲ್ಲಿ ಸುಮಾರು 300 ಮೀಟರ್ ಸಿಸಿ ರಸ್ತೆ ಕಾಮಗಾರಿ ಮಂಜುರಾತಿಯಾದರೂ ಸಹ ಕಾಮಗಾರಿ ಮಾಡುವ ರಸ್ತೆಯನ್ನು ಗ್ರಾಮಸ್ಥರು ಒತ್ತುವರಿ ಮಾಡಿಕೊಂಡು ಸಿಸಿ ರಸ್ತೆ ಕಾಮಗಾರಿಗೆ ಕಿರಿ ಕಿರಿಯಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ತಹಶೀಲ್ದಾರ್ ರೇಹಾನ್ ಪಾಷಾ, ಲೋಕೋಪಯೋಗಿ ಇಲಾಖೆ ಎಇಇ ಅಕೀಮ್, ಪಿಐ ಕುಮಾರ್ ನೇತೃತ್ವದಲ್ಲಿ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿ ರಸ್ತೆ ಕಮಾಗಾರಿಗೆ ಚಾಲನೆ ನೀಡಲಾಯಿತು.