ಹಾಸನ: ನಗರದ ಎಸ್.ಎಂ. ಕೃಷ್ಣ ನಗರದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪರಿಸರಕ್ಕಾಗಿ ನಡಿಗೆಗೆ ಬಾರಿ ಬೆಂಬಲ ದೊರಕಿದ್ದು, ವಿವಿಧ ಮಠದ ಸ್ವಾಮೀಜಿಗಳು, ಪರಿಸರ ಪ್ರೇಮಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ನಿವಾಸಿಗಳು ಭಾಗವಹಿಸಿ ಗಮನ ಸೆಳೆದರು.ನಗರದ ಎಸ್ ಎಂ ಕೃಷ್ಣ ನಗರದ ಮುಖ್ಯ ಪ್ರವೇಶ ದ್ವಾರದಿಂದ ಪ್ರಾರಂಭವಾದ ಪರಿಸರಕ್ಕಾಗಿ ಕಾಲ್ನಡಿಗೆಗೆ ಹಾಸನ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರೋಟರಿ ಕ್ಲಬ್ ಆಫ್ ಹಾಸನ್ ಮಿಡ್ ಟೌನ್, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಇತರೆ ಸಂಘ ಸಂಸ್ಥೆಗಳು ಭಾಗವಹಿಸಿ ಇಲ್ಲಿನ ಬೀದಿಗಳನ್ನು ಸುತ್ತಾಡಿ ಇಲ್ಲಿ ವಾಸ ಮಾಡುವ ನಿವಾಸಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.