ಹುಬ್ಬಳ್ಳಿಯಲ್ಲಿ ಧೂಳಿನಿಂದ ಜನರು ಬೇಸತ್ತಿದ್ದು ಜನಪ್ರತಿನಿಧಿಗಳ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಹಳೆ ಹುಬ್ಬಳ್ಳಿಯಲ್ಲಿ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಧೂಳಿನಿಂದ ಕಿರಿಕಿರಿಯಾಗುತ್ತಿದ್ದು. ಅಂಗಡಿಯಲ್ಲಿ ವ್ಯಾಪಾರಸ್ಥರು ಕುಳಿತುಕೊಳ್ಳದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಾವೇ ಖುದ್ದು ದಿನಕ್ಕೆ ಎರಡು ಬಾರಿ ರಸ್ತೆಗೆ ನೀರು ಹೊಡೆಯುತ್ತಿದ್ದು. ಸಾಕಾಗಿದೆ ಆದರೂ ಕೂಡ ಧೂಳು ಕಡಿಮೆಯಾಗುತ್ತಿಲ್ಲ. ಜನಪ್ರತಿನಿಧಿಗಳು ಯಾರೂ ಕೂಡ ಇತ್ತ ಗಮನಹರಿಸುತ್ತಿಲ್ಲವೆಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.