ಸಿದ್ಧಾಪುರದಲ್ಲಿ ಶಿಕ್ಷಣ ಪ್ರಸಾರಕ ಸಮಿತಿ ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ನಾಯಕ ದಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಹಾನ್ ಚೇತನ ದಿ.ರಾಮಕೃಷ್ಣ ಹೆಗಡೆ ಅವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು. ನಂತರ ಚೇತನ ಕ್ರೆಡಿಟ್ ಕೋ - ಆಪರೇಟಿವ ಸೌಹಾರ್ದ ಸೊಸೈಟಿಯನ್ನು ಉದ್ಘಾಟಿಸಿ, ಶುಭ ಹಾರೈಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ,ಶಾಸಕ ಆರ್ ವಿ ದೇಶಪಾಂಡೆ,ಪ್ರಮುಖ ರಾದ ಶಶಿಭೂಷಣ ಹೆಗಡೆ,ಪ್ರಮೋದ ಹೆಗಡೆ,ಇತರರು ಇದ್ದರು.