ಯಲ್ಲಾಪುರ: ಗಣೇಶ ಚತುರ್ಥಿ ಹಬ್ಬ ದ ನಿಮಿತ್ತ ಪಟ್ಟಣದ ಮನೆ ಮನೆಗಳಲ್ಲಿ,ವಿವಿಧೆಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು. ಪಟ್ಟಣದ ಬಹುತೇಕ ಸಾರ್ವಜನಿಕ ಗಣೇಶ ಸಮಿತಿಗಳು ಸುಂದರವಾಗಿ ಅಲಂಕರಿಸಿದ ಮಂಟಪದಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಣೇಶೋತ್ಸವ ಆಚರಣೆ ಗೆ ಚಾಲನೆ ದೊರೆತಿದೆ.ಆಗಾಗ ಸುರಿಯುತ್ತಿರುವ ಮಳೆಯ ಸಿಂಚನದ ನಡುವೆ ಪಟ್ಟಣದ ಕಲಾವಿದ ಕುಟುಂಬದವರ ಮನೆಗಳಲ್ಲಿ ತಯಾರಿಸಲಾದ ಆಕರ್ಷಕ ಪರಿಸರ ಸ್ನೇಹಿ ಗಣೇಶ ಮೂರ್ತಿ ಗಳನ್ನು ಜನರು ಖರೀದಿಸಿ ಭಕ್ತಿಯಿಂದ ತಲೆಯ ಮೇಲೆ ಹೊತ್ತು ಹಾಗೂ ವಾಹನಗಳಲ್ಲಿ ಕರೆದೋಯ್ದು ಸಿಂಗರಿಸಿದ ಮಂಟಪ ದಲ್ಲಿ ಪ್ರತಿಷ್ಠಾಪನೆ ಮಾಡಿದರು.