ಅಗಸ್ಟ ೨೯ ಮಧ್ಯಾಹ್ನ ೨ ಗಂಟೆಯ ಸಂದರ್ಭ ಬಾಗಲಕೋಟ ಜಿಲ್ಲೆಯ ಇಳಕಲ್‌ದ ಸೆಂಟ್ರಲ್ ಸ್ಕೂಲ್ ಮುಂದಿನ ವಾರ್ಡ ನಂಬರ್ ೧ ರ ತೆಗ್ಗಿನ ಓಣಿಯಲ್ಲಿಸಿಸಿ ರಸ್ತೆ ಕಾಮಗಾರಿ ಮಾಡುವ ವೇಳೆ ಮಾಡಿದ ಅಸಮರ್ಪಕ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಮಳೆ ಸುರಿದರೇ ಸಾಕು ಮಳೆ ನೀರು ಓಣಿಯ ತುಂಬ ನೀರು ನಿಂತು ನೀರು ಮುಂದೆ ಸಾಗಲು ವ್ಯವಸ್ಥೆ ಇಲ್ಲದ ಕಾರಣ ಮಲೀನಗೊಂಡು ನೀರು ಮನೆಗಳಿಗೆ ನುಗ್ಗುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಸುರಿದ ಸಮಯದಲ್ಲಿ ಓಣಿಯಲ್ಲಿ ಸಂಚರಿಸಬೇಕಾದರೆ ಮಲೀನ ನೀರಿನಲ್ಲಿಯೇ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೌದು ಓಣಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡುವ ಸಂದರ್ಭದಲ್ಲಿ ಮ್ಯಾನ್ ಹೋಲ್‌ನ್ನು ಮುಚ್ಚಿದ್ದರಿಂದ ಮಳೆ ನೀರು