ಆಲೂರು: ರಸ್ತೆ ವಿಚಾರವಾಗಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಆಲೂರು ತಾಲೂಕಿನ ಕೆ ಹೊಸಕೋಟೆ ಹೋಬಳಿಯ ಹುಸ್ಕೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಂಜಮ್ಮ ಎಂಬುವರ ಮೇಲೆ ಅದೇ ಗ್ರಾಮದ ಶಾಂತವೀರಪ್ಪ ಬಿನ್ ಗೌಡೇಗೌಡ ಮತ್ತು ಪ್ರೇಮ ಹಾಗೂ ಅವರ ಕುಟುಂಬದವರು ಸೇರಿಕೊಂಡು ಇದು ರಸ್ತೆ ನಮ್ಮದು ಎಂದು ಅಸಭ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ದೊಣ್ಣೆಯಿಂದ ಎಡಗೈ ಗೆ ಹೊಡೆದು ಎಡಗೈಯನ್ನು ಮುರಿದು ಹಾಕಿದ್ದಾರೆ..ಘಟನಾ ಸ್ಥಳಕ್ಕೆ ಪೊಲೀಸ್ ಬಂದು ಮಾಹಿತಿ ಪಡೆದು ದೂರು ದಾಖಲು ಮಾಡಿಕೊಂಡು ಹಲ್ಲೆಗೆ ಒಳಗಾದ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ.