ಯಲ್ಲಾಪುರ : ಉದ್ಯಮನಗರದಲ್ಲಿ ಮನೆಗಳ ಮುಂದೆ ಇರುವ ಚರಂಡಿ ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವದರಿಂದ ನಾಗರಿಕರು ಅಸಹ್ಯ ಪಟ್ಟುಕೊಂಡು ಅನಿವಾರ್ಯ ವಾಗಿ ಓಡಾಡುವಂತಾಗಿದೆ.ಪಟ್ಟಣ ಪಂಚಾಯತಿ ಯಿಂದ ಚರಂಡಿ ಸ್ವಚ್ಚ ಗೊಳಿಸದೇ ಹಾಗೆ ಬಿಟ್ಟಿದ್ದರಿಂದ ಮನೆಯ ಬಚ್ಚಲು ನೀರು ಸೇರಿದಂತೆ ಕಸ ಕಡ್ಡಿ ಎಲ್ಲವೂ ಗಟಾರದಲ್ಲಿ ನಿಂತು ರಸ್ತೆ ಮೇಲೆ ಹರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.ಕೂಡಲೇ ಸಂಬಂಧ ಪಟ್ಟ ಇಲಾಖೆಯರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.