ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬಾಗಲಕೋಟ ಜಿಲ್ಲೆಯ ಇಳಕಲ್ಲ ತಾಲೂಕಿನ ಸಂಕ್ಲಾಪೂರ ಗ್ರಾಮದ ಗ್ರಾಮಸ್ಥರು ಸೆ.೦೮ ರಂದು ಮಧ್ಯಾಹ್ನ ೧ ಗಂಟೆಗೆ ಪ್ರತಿಭಟನೆಯನ್ನು ನಡೆಸಿದರು. ತಹಸೀಲ್ದಾರ ಕಚೇರಿಯ ಆವರಣದಲ್ಲಿ ಸೋಮವಾರಂದು ಪ್ರತಿಭಟಿಸಿ ಗ್ರಾಮಕ್ಕೆ ಕುಡಿಯುವ ನೀರು,ಗಟಾರು, ನೀರಿನ ನಲ್ಲಿಗಳು ಹಾಗೂ ಗ್ರಾಮದ ಸರ್ವೆ ನಂಬರ್ ೩೫/೨ ಕ್ಷೇತ್ರ ೦೩ ಎಕರೆ ಆಕಾರ ೩.೬೪ ಸದರಿ ಜಮೀನಿನಲ್ಲಿ ಗ್ರಾಮ ಇದ್ದು ಇದನ್ನು ಭೂಮಾಪನಾ ಇಲಾಖಾ ಅಧಿಖಾರಿಗಳಿಂದ ಅಳತೆ ಮಾಡಿಸಿ ಹದ್ದುಬಸ್ತು ಮಾಡುವಂತೆ ಉಪತಹಸೀಲ್ದಾರ ಈಶ್ವರ ಗಡ್ಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪರಶುರಾಮ ಬಾದವಾಡಗಿ, ಹುಲ್ಲಪ್ಪ ಕಮರಿ, ಚೆನ್ನಪ್ಪ ಬಾದವಾಡಗಿ, ಶರಣಪ್ಪ ಕಮರಿ, ಮರಿಯಪ್ಪ ಉಸಲಕೊಪ್ಪ, ಬಸವರಾಜ ಬಾದವಾಡಗಿ, ಶಂಕ್ರಪ್ಪ ವಡ್ಡರ