ನಟ ಅನಿರುದ್ಧ ಜತ್ಕರ್ ನಟನೆ ಮಾತ್ರವಲ್ಲದೆ, ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡವರು. ಕೆರೆ ಅಭಿವೃದ್ಧಿ ಸೇರಿ ರಸ್ತೆ, ಚರಂಡಿ ಅವ್ಯವಸ್ಥೆ ಬಗ್ಗೆ ಮಾತನಾಡಿ, ಸರ್ಕಾರದ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಭಾನುವಾರ ಬೆಂಗಳೂರಿನ ಕಗ್ಗಲಿಪುರದ ಬಳಿಯ ತರಳು ಕೆರೆಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಬಗ್ಗೆ ಸಂಪೂರ್ಣ ವಿಡಿಯೋ ಮಾಡಿದ್ದಾರೆ. ಸ್ಥಳೀಯರಲ್ಲಿ, ರಾಜಕಾರಣಿಗಳು, ಅಧಿಕಾರಿಗಳಲ್ಲಿ ಕೆರೆ ಉಳಿವಿಗಾಗಿ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಭಿಮಾನ್ ಸ್ಟುಡಿಯೋ ನೆಲಸಮ ಮಾಡಿದಾಗಲೂ ಸರ್ಕಾರದ ನಡೆ ಖಂಡಿಸಿದ್ದ ಅನಿರುದ್ಧ, ಜಯನಗರದ ಮನೆ ಬಳಿ ಸುದ್ದಿಗೋಷ್ಟಿ ಆಯೋಜಿಸಿ ಬೇಸರ ವ್ಯಕ್ತಪಡಿಸಿದ್ದರು.