ಯಲ್ಲಾಪುರ : ಉತ್ತರ ಕನ್ನಡದ ಅಭಿವೃದ್ಧಿಯ ದೃಷ್ಟಿಯಲ್ಲಿ ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆಯು ಅತ್ಯಂತ ಮಹತ್ವದ್ದಾಗಿದೆ. ಅದನ್ನು ಸಾಕಾರಗೊಳಿಸುವತ್ತ ಪರಿಶ್ರಮಿಸಿದ ಸರ್ವರಿಗೂ ಯಲ್ಲಾಪುರ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸಬಯಸುತ್ತೇನೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಪಟ್ಟಣದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಹೇಳಿದರು.. ಈ ಯೋಜನೆ ಸಾಕಾರಗೊಳ್ಳಲು ಬಹಳ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿತ್ತು. ಪ್ರಮುಖವಾಗಿ ರಾಜೀವ್ ಗಾಂವ್ಕರ್, ಜಾರ್ಜ್ ಫರ್ನಾಂಡಿಸ್ ಅವರು ವಿಶೇಷ ಕಾಳಜಿಯಿಂದ ಯೋಜನೆಯ ಮಹತ್ವವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿರುತ್ತಾರೆ.ಇದಕ್ಕೆ ಯಲ್ಲಾಪುರದ ನಾಗರಿಕರು, ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ. ಇವರೆಲ್ಲರ ಸಂಘಟನಾತ್ಮಕ ಹೋರಾಟದ ಫಲವಾಗಿ ಇಂದು ನಮಗೆ ಜಯ ಸಿಕ್ಕಿದೆ ಎಂದರು