ಅರಮನೆ ಮೈದಾನದಲ್ಲಿ ಆಗಸ್ಟ್ 31ರಂದು ಭಾನುವಾರ ನಡೆದ ಅರಸು ಅಸೋಸಿಯೇಷನ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದರು. ಬೆಳಿಗ್ಗೆ 11 ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಮಹಾರಾಜಕುಮಾರಿ ಕಾಮಾಕ್ಷಿದೇವಿ, ಆತ್ಮಾನ್ಯ ದೇವ್, ಮಹಾರಾಜಕುಮಾರಿ ಇಂದ್ರಾಕ್ಷಿ ದೇವಿ, ರಾಜಚಂದ್ರ ಅರಸ್, ಕಪ್ಪಡಿ ಕ್ಷೇತ್ರ ಮಂಟೇಸ್ವಾಮಿ ಮಠದ ಶ್ರೀ ಶ್ರೀಕಂಠ ಸಿದ್ದಲಿಂಗರಾಜೇ ಅರಸ್,ತಮಿಳುನಾಡು ದ್ರೋಣಗಿರಿ ಮಠದ ಶ್ರೀ ಅಶೋಕ ರಾಜೇಂದ್ರ ಸ್ವಾಮೀಜಿ, ರಾಜ್ಯ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.