ಪ್ರತಾಪ್ ಸಿಂಹ ಅವರನ್ನ ಬಿಜೆಪಿಯವರು ಪಾಪ ಬಿಸಾಕಿದ್ದಾರೆ, ಬದುಕಿದ್ದೀನಿ ಎಂದು ತೋರಿಸಿಕೊಳ್ಳಲು ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಸೆಪ್ಟೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಸದಾಶಿನಗರದಲ್ಲಿ ಅವರು ಮಾತನಾಡಿದರು.ಈ ವೇಳೆ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಲೇಖಕಿ ಭಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಿರುವುದನ್ನ ಪ್ರಶ್ನಿಸಿ ಪ್ರತಾಪ್ ಸಿಂಹ ಅವರು ಹೈಕೋರ್ಟ್ ಮೊರೆ ಹೋಗಿರುವ ಪ್ರಶ್ನೆಗೆ ಉತ್ತರಿಸಿದ ಅವರು, 'ಬಿಜೆಪಿಯವರಿಗೆ ಏನು ವಿಚಾರವಿಲ್ಲ, ನ್ಯಾಯಾಲಯ ಹೇಳಿದಂತೆ ಮಾಡೋಣ ಬಿಡಿ' ಎಂದರು.