ಗಣೇಶ ಹಬ್ಬದಲ್ಲಿ ಸಾಮಾನ್ಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ವಿವಿಧ ಸ್ಪರ್ಧೆಗಳನ್ನು ಅಯೋಜಿಸೋದು ಸಾಮಾನ್ಯ. ಆದ್ರೇ ಇದಶ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಶ್ರೀ ಬಾಲ ವಿನಾಯಕ ಮಿತ್ರ ಮಂಡಳಿ ವತಿಯಿಂದ ಮ್ಯಾರಥಾನ್ ಓಟವನ್ನು ಆಯೋಜನೆ ಮಾಡಲಾಗುತ್ತು. ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮ್ಯಾರಥಾನ್ ಗೆ ಚಾಲನೆ ನೀಡಿದರು. ನಿತ್ಯ ವಾಯಾಮ, ಯೋಗ ಮಾಡೋದ್ರಿಂದ ದೈಹಿಕ ಅರೊಗ್ಯವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳುವ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಸಲಹೆ ನೀಡಿದರು. ಮ್ಯಾರಥಾನ್ ನಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು ನಗರದ ವಿವಿಧ ರಸ್ತೆಗಳ ಮೂಲಕ ನಡೆದ ಮ್ಯಾರಥಾನ್ ನೋಡಗರ ಗಮನ ಸೆಳೆಯಿತು.