ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ತಾಲ್ಲೂಕಿನ ತಳಕು ಗ್ರಾಮದ ರೈಲ್ವೆ ಕೆಳ ಸೇತುವೆ ಕೆಳಗೆ ಜೋಡೆತ್ತಿನಗಾಡಿಗಳನ್ನು ಓಡಿಸುವ ಮೂಲಕ ನನ್ನಿವಾಳ ಗ್ರಾ ಪಂ ವ್ಯಾಪ್ತಿಯ ಬುಡಕಟ್ಟು ಮ್ಯಾಸನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಶ್ರೀಗೌರಸಮುದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ನನ್ನಿವಾಳ ಗ್ರಾಪಂ ವ್ಯಾಪ್ತಿಯ ಬುಡಕಟ್ಟು ಮ್ಯಾಸನಾಯಕರು ಎತ್ತಿನಗಾಡಿಗಳಲ್ಲಿ ಹೋಗುವ ಸಂಪ್ರದಾಯವನ್ನು ರೂಡಿಸಿಕೊಂಡಿರುವುದು ವಿಶೇಷವಾಗಿದ್ದು, ಮಂಗಳವಾರ ಜಾತ್ರೆ ಮುಗಿಸಿಕೊಂಡು ಬರುವಾರ ಜೋಡೆತ್ತಿನಗಾಡಿಗಳು ಓಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.