ಕಲಬುರಗಿಯ ನೂತನ ಮೇಯರ್ ವರ್ಷಾ ಜಾನೆ ಗಣೇಶ ವಿಸರ್ಜನ ಸ್ಥಳಕ್ಕೆ ಭೇಟಿ ನೀಡಿದ್ದರು. ಅಧಿಕಾರ ಸ್ವೀಕಾರ ನಂತರ ಮೊದಲ ಬಾರಿಗೆ ವರ್ಷಾ ಜಾನೆ ಪಾಲಿಕೆ ಅಧಿಕಾರಿಗಳೊಂದಿಗೆ ಅಪ್ಪಾ ಕೇರೆಯ ಗಣೇಶ ವಿಸರ್ಜನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮರಾಗಳು ಅಳವಡಿಸಲಾಗಿದೆ. ವಿಸರ್ಜನೆ ಕಾರ್ಯ ವಿಕ್ಷಣೆಗೆ ಎಲ್‌ಇಡಿ ಅಳವಡಿಸಲಾಗುವದು ಎಂದು ತಿಳಿಸಿದ್ದಾರೆ. ಬುಧವಾರ 5 ಗಂಟೆಗೆ ಭೇಟಿನೀಡಿ ಪರಿಶೀಲನೆ ಮಾಡಿದ್ದಾರೆ.