ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆ ವಿಚಾರ ನಗರದಲ್ಲಿ ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಪ್ರತಿಕ್ರಿಯೆ ನೀಡಿದ್ದಾರೆ ಬ್ಯಾಲೆಟ್ ಪೇಪರಲ್ಲಿ ಹೆಚ್ಚು ಅಕ್ರಮ ನಡೆಯುತ್ತೆ ಇವಿಎಂ ನಲ್ಲಿ ಅಕ್ರಮ ಮಾಡಲು ಸಾಧ್ಯ ಇಲ್ಲ ಕಾಂಗ್ರೆಸ್ ಮತ ಕದಿಯಲು ಈ ಹುನ್ನಾರ ಮಾಡಿದೆ ಎಂದು ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಗಂಭೀರ ಆರೋಪ ಮಾಡಿದ್ದಾರೆ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಪಡೆದಾಗ ಮತಗಳ್ಳತನ ಆಗಿತ್ತಾ? ಒಂದು ಇದ್ದ ಸಂಸದರ ಸ್ಥಾನ ಏಳಕ್ಕೆ ಬಂದಾಗ ಮತ ಕದ್ದಿದ್ರಾ? ರಾಹುಲ್ ಗಾಂಧಿ ನಾಯಕತ್ವ ದೇಶದ ಜನ ಒಪ್ಪಲ್ಲ ಎಂದು ಗೊತ್ತಾಗಿದೆ ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ ಸಿದ್ದರಾಮಯ್ಯ ಮೇಲಿನ ನಾಯಕರ ಒತ್ತಡಕ್ಕೆ ಮಣಿದಿದ್ದಾರೆ ಬಿಹಾರದಲ್ಲಿ ಎಲ್ಲಾವೂ ಫೈಲ್ಯೂರ್ ಆಗಿದೆ ಎಂದು ಕೆ.ಜಿ.ಬೋಪಯ್ಯ ಕಾಂಗ್ರೆಸ್ ಸರಕಾರದ ವಿರುದ್ದ ವಾಗ್ದಾಳಿ