ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳದ ಹೊರವಲಯದ ಜಿನ್ನಾಥಪುರ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.ಯಾರೋ ದುಷ್ಕರ್ಮಿಗಳು ಬೇರೆಡೆ ವ್ಯಕ್ತಿಯನ್ನು ಕೊಲೆ ಮಾಡಿ ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದು ಮೃತ ದೇಹವು ಸಂಪೂರ್ಣ ಸುಡಡಿದ್ದಾಗ ಉಳಿದ ಅಸ್ತಿಯನ್ನು ಗೊಬ್ಬರದ ಚೀಲದಲ್ಲಿ ತುಂಬಿಕೊAಡು ಇಲ್ಲಿಯ ಸ್ಮಶಾನಕ್ಕೆ ತಂದು ಎಸೆಯಲಾಗಿದೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ದನ ಮೇಯಿಸಲು ಬಂದ ವ್ಯಕ್ತಿ ಸುಟ್ಟು ಕರಕಲಾದ ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತ, ಭೇಟಿ ನೀಡಿದರೆ.