ಶಿರಸಿ : ಕೊಲೆ ಆರೋಪಿ ಇಬ್ರಾಹಿಂ ಗೆ ಜೀವಾವಧಿ ಶಿಕ್ಷೆ ಹಾಗು 10 ಸಾವಿರ ರೂ ದಂಡ ಹಾಗು ಕೊಲೆಗೆ ಸಹಕರಿಸಿದ ಆರೋಪಿಗಳಾದ ಶರೀಫ್ ಮತ್ತು ನಾಝಿಯಾಗೆ 3 ವರ್ಷ ಸಜೆ ಹಾಗು ತಲಾ 3 ಸಾವಿರ ರೂ ದಂಡ ಹಾಗು ಮೃತ ಮೆಹಬೂಬ್ ಅಲಿ ಪತ್ನಿ ಬೇಬಿ ಆಯಿಶಾಗೆ 25 ಸಾವಿರ ರೂ ಪರಿಹಾರ ನೀಡುವಂತೆ ಶಿರಸಿ ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯದೀಶರಾದ ಕಿರಣ ಕಿಣಿ ಮಹತ್ವದ ತೀರ್ಪು ನೀಡಿದ್ದಾರೆ. ಕೊಲೆ ಪ್ರಕರಣದ ಆರೋಪಿತರೆಲ್ಲರೂ ಮುಂಡಗೋಡ ತಾಲೂಕಿನ ಲಕ್ಕೊಳ್ಳಿಯವರಾಗಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ರಾಜೇಶ ಎಂ ಮಳಗಿಕರ ವಾದ ಮಂಡಿಸಿದ್ದರು.