ಸುಕೇಶ್ ಎಂಬ ರೌಡಿಶೀಟರ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಐವರು ಆರೋಪಿಗಳನ್ನ ಕೋಣನಕುಂಟೆ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪವನ್, ಧನುಷ್, ಸತೀಶ್, ಯಶವಂತ್, ಕಿರಣ್ ಬಂಧಿತರು. 27ನೇ ತಾರೀಖು ಆರ್ ಆರ್ ಬಾರನಲ್ಲಿ ಎಣ್ಣೆ ಹೊಡೆಯಲು ಕುಳಿತಿದ್ದಾಗ ಸುಕೇಶ್ ನನ್ನ ನೋಡಿದ್ದ ಪವನ್ ಹಳೆ ಗಲಾಟೆಗಳನ್ನ ನೆನಪಿಸಿಕೊಂಡು ಏಕಾ ಏಕಿ ಬಾಟಲ್ ನಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸ್ರು ಐವರನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಈ ಬಗ್ಗೆ ಮೇ 3ರಂದು ಸೌತ್ ಎಂಡ್ ಸರ್ಕಲ್ ನ ಕಚೇರಿಯಲ್ಲಿ ಬೆಳಗ್ಗೆ 10ಗಂಟೆಗೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಮಾಹಿತಿ ನೀಡಿದ್ರು.