ಆಳಂದ ತಾಲೂಕಿನ ದುತ್ತರಗಾಂವ್ ಗ್ರಾಮದ ಚೆಕ್ ಡ್ಯಾಮ್‌ಗೆ ಶಾಸಕ ಬಿ.ಆರ್. ಪಾಟೀಲ್ ಬಾಗಿನ ಅರ್ಪಣೆ ಮಾಡಿದ್ದಾರೆ. ಗ್ರಾಮದ ಮುಖಂಡರೊಂದಿಗೆ ಡ್ಯಾಮ್‌ಗೆ ತೆರಳಿದ ಶಾಸಕರು, ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದ್ದಾರೆ. ಕೆಎಂಎಫ್ ನಿರ್ದೇಶಕರು, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೋಮವಾರ 3ಗಂಟೆ ಸುಮಾರಿಗೆ ಶಾಸಕರು ಬಾಗಿನ ಅರ್ಪಿಸಿದ್ದಾರೆ...