ಹಾಸನ: ರೈಲ್ವೆ ಇಲಾಖೆಯಿಂದ ರಾಜಘಟ್ಟ ಬಳಿ ನಿರ್ಮಾಣ ಮಾಡುತ್ತಿರುವ ಲೋಡಿಂಗ್ ಲಾರಿಗಳಿಗೆ ಶೀಟ್ ಅಳವಡಿಕೆ ಕಾಮಗಾರಿಯಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಸ್ಥಳಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರೂ.ರೈಲ್ವೆ ಇಲಾಖೆಯ ರೈಲ್ವೆ ಕಾಮಗಾರಿಯಿಂದ ಸುತ್ತಮುತ್ತಲ 8 ಹಳ್ಳಿಗಳಿಗೆ ತೊಂದರೆ ಆಗುತ್ತಿದ್ದು ಕೈಗಾರಿಕಾ ಪ್ರದೇಶಕ್ಕೆ ತೆರಳುವ ಕಾರ್ಮಿಕರು, ಹಾಗೂ ನಗರ ಪ್ರದೇಶ ಹಾಗೂ ಬೈ ಪಾಸ್ ರಸ್ತೆಗೆ ನಿತ್ಯ ಓಡಾಡುವ ವಾಹನಗಳಿಗೆ ಹಾಗೂ ಜನರಿಗೆ ಇದರಿಂದ ತೊಂದರೆ ಆಗುತ್ತದೆ ಎಂಬುದು ಸ್ಥಳೀಯರ ಆರೋಪ.