ನಗರದ ದುರ್ಗದ ಬೈಲ್ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆ ಟೆಂಡರ್ ಪಡೆದ ವೆಂಕಟೇಶ್ ಎಂಬಾತ ಅವಾಜ್ ಹಾಕಿದ್ದನ್ನು ಖಂಡಿಸಿ ದುರ್ಗದ ಬೈಲ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಮಹಾನಗರ ಪಾಲಿಕೆ ಟೆಂಡರ್ ಪಡೆದು ಬಡ ವ್ಯಾಪಾರಿಗಳ ಮೇಲೆ ಅವಾಜ್ ಹಾಕಿ ಅಂಗಡಿ ತೆರುಗೊಳಿಸಿರುವುದು ಯಾವ ಯಾವ ರೀತಿ ವರ್ತನೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.