ತುಮಕೂರು ದಸರಾದಲ್ಲಿ ತಪ್ಪು ಹುಡುಕಲು ಹೋಗಬೇಡಿ ಎಂದು ಮಾಧ್ಯಮಗಳಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ನೀಡಿದ್ದ ಎಚ್ಚರಿಕೆಗೆ ಪ್ರತಿಕ್ರಿಯಿಸಿ, ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮೂರಿನವರು ಎಂಬ ಆತ್ಮೀಯತೆಯಿಂದ ಆ ರೀತಿ ಹೇಳಿದ್ದೆ. ಅದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿರಲಿಲ್ಲ. ಆತ್ಮೀಯತೆಯಲ್ಲಿ ಮಾತನಾಡುವ ಹಾಗಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.