ಅವಧಿ ಅಂತ್ಯವಾದ ನಂತರ ಕುಳಿತುಕೊಳ್ಳುವಂತಿಲ್ಲ ಎಂದಿದ್ದಕ್ಕೆ ಬಾರ್ ಕೌಂಟರ್‌ನೊಳಗೆ ನುಗ್ಗಿ ಕ್ಯಾಶಿಯರ್ ಮೇಲೆ ಹಲ್ಲೆಗೈದಿರುವ ಘಟನೆ ಹೆಗ್ಡೆ ನಗರದ ಕೆ.ಎಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಸೆಪ್ಟೆಂಬರ್ 16ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಏಕಾಏಕಿ ನುಗ್ಗಿದ ಕಿಡಿಗೇಡಿಗಳು ಕ್ಯಾಶಿಯರ್ ಮೇಲೆ ಹಲ್ಲೆಗೈದು ಕಾಲ್ಕಿತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.ಸೆಪ್ಟೆಂಬರ್ 15ರಂದು ವಿಲ್ಸನ್ ಜಾಯ್ ಎಂಬಾತ ಎಸ್.ಕೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಸ್ನೇಹಿತರಿಗೆ ತನ್ನ ಬರ್ತ್ ಡೇ ಪಾರ್ಟಿ ನೀಡಿದ್ದ.ಆದರೆ ಅವಧಿ ಮುಗಿದ ನಂತರವೂ ಕುಳಿತಿದ್ದರಿಂದ ಎದ್ದು ಹೋಗುವಂತೆ ಬಾರ್ ಸಿಬ್ಬಂದಿ ಸೂಚಿಸಿದ್ದರು.ಅದೇ ಜಿದ್ದಿಗೆ ಮರು ದಿನ ಬಾರ್ ಬಳಿ ಬಂದಿದ್ದ ಜಾಯ್ ಸ್ನೇಹಿತರು ಕ್ಯಾಶಿಯರ್ ಮೇಲೆ ಹಲ್ಲೆಗೈದಿದ್ದಾರೆ.ಬಾ