ಹಾಸನ ಜಿಲ್ಲೆಯಾದ್ಯಂತ ಇನ್ನು ಸಂಭ್ರಮದ ಗಣೇಶ ಚತುರ್ಥಿ ಹಬ್ಬ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಿವಿಧೆಡೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.ಗಣೇಶ ಚತುರ್ಥಿ ದಿನ ಒಂದೆಡೆ ಸಾಮೂಹಿಕವಾಗಿ ಹಾಗೂ ಮತ್ತೊಂದೆಡೆ ಮನೆ ಮನೆಗಳಲ್ಲಿಯುೂ ಗೌರಿ, ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಕೆಲ ದಿನಗಳ ನಂತರ ಗೌರಿ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ಬಿಡಲಾಗುವುದು. ಹಬ್ಬದ ಅಂಗವಾಗಿ ವಿವಿಧೆಡೆ ಅನ್ನ ಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬಳಿಕ ವಿಸರ್ಜನೆಯ ಅಂತಿಮ ದಿನ ವಿವಿಧ ಕಲಾ ತಂಡಗಳು ಹಾಗೂ ಡಿಜೆ ಹಾಕಿ ಮೆರವಣಿಗೆ ನಡೆಸುವ ಮೂಲಕ ಅದ್ದೂರಿಯಾಗಿ ವಿಸರ್ಜನೆ ಮಾಡಲಾಗುವುದು.