ನಗರದ ಶಾಸಕರ ಭವನದಲ್ಲಿ ಭಾನುವಾರ ನಗರಸಭೆ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕವಿತಾ ಅವರನ್ನು ಶಾಸಕ ಟಿ.ರಘುಮೂರ್ತಿ ಶಾಲು, ಪುಷ್ಪಹಾರ ಹಾಕಿ ಸನ್ಮಾನಿಸಿದರು. ನಗರಸಭೆಯ ಕೊನೆ ಅವಧಿಗೆ ಸದಸ್ಯೆ ಕವಿತಾ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆ ಶಾಸಕ ಟಿ.ರಘುಮೂರ್ತಿ ಸನ್ಮಾನಿಸಿ, ಅಭಿನಂದಿಸಿದ್ದಾರೆ. ಈ ವೇಳೆ ಗ್ಯಾರೆಂಟಿ ಯೋಜನೆಗಳ ಸಮಿತಿ ತಾಲ್ಲೂಕು ಅಧ್ಯಕ್ಷ ಗದ್ದುಗೆ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಧರ್ ಸೇರಿದಂತೆ ಮುಂತಾದವರು ಇದ್ದರು.