ಇದೆ ಸೆಪ್ಟೆಂಬರ್ 12ರಂದು ಬಿಡುಗಡೆಗೆ ಸಿದ್ದವಾಗಿರುವ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾ ತಂಡ, ಪ್ರಸಿದ್ದ ಪುಣ್ಯ ಕ್ಷೇತ್ರ ಸಿದ್ದಗಂಗಾ ಮಠಕ್ಕೆ ಮಂಗಳವಾರ ಸಂಜೆ 5 ಗಂಟೆಯಲ್ಲಿ ಭೇಟಿ ನೀಡಿದೆ. ತುಮಕೂರಿನ ಹೊರವಲಯದ ಕ್ಯಾತಸಂದ್ರದ ಬಳಿಯ ಸಿದ್ದಗಂಗಾ ಮಠಕ್ಕೆ ಚಿತ್ರದ ನಾಯಕ ನಟ ಪ್ರವೀರ್ ಶೆಟ್ಟಿ ಹಾಗೂ ನಟಿ ರಿಷಿಕಾ ಸೇರಿದಂತೆ ನಿದ್ರಾದೇವಿ ನೆಕ್ಸ್ಟ್ ಡೋರ್ ಚಿತ್ರತಂಡ ಆಗಮಿಸಿ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳ ಆಶೀರ್ವಾದ ಪಡೆಯಿತು. ಇನ್ನೂ ಸಿದ್ದಗಂಗಾ ಶ್ರೀಗಳಿಗೆ ಟ್ರೈಲರ್ ತೋರಿಸಿದ ಚಿತ್ರತಂಡ ಖುಷಿಪಟ್ಟರು. ಇದೆ ಮೊದಲ ಬಾರಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ ನಾಯಕ ನಟನಾಗಿರುವ ಹಿನ್ನಲೆ ಚಿತ್ರತಂಡದ ಜೊತೆ ಆಗಮಿಸಿ ಶ್ರೀಗಳ ಆಶೀ