ಸಮೀಕ್ಷೆ ಕಾರ್ಯ ಸರ್ಕಾರದ ಕೆಲಸವಾಗಿದ್ದು, ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅಕ್ಟೋಬರ್ 7ರ ಒಳಗಾಗಿ ಗಣತಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾರೆ.ಜಿಲ್ಲಾಯಾಧ್ಯಂತ ಎಲ್ಲಾ ತಾಲೂಕಿನ ತಹಶೀಲ್ದಾರ್ ಳೊಂದಿಗೆ ಶನಿವಾರ ವೀಡಿಯೋ ಸಂವಾದ ನಡೆಸಿದಾಗ ನಗರದ ತಾ.ಕಚೇರಿಯಲ್ಲಿ ತಹಶೀಲ್ದಾರ್ ಭಾಗವಹಿಸಿದಾಗ ಸೂಚನೆ ನೀಡಿದ್ದಾರೆ.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿಯಿಂದ ಯಾರೂ ಯಾರನ್ನು ಕೈಬಿಡಂತೆ ನಿಗದಿತ ಸಮಯದೊಳಗೆ ಶೇ100 ಗುರಿ ತಲುಪಬೇಕು ಎಂದು ಖಡಕ್ ಸೂಚನೆ ನೀಡಿದರು.