ಹಾಸನ: ವೀರೇಂದ್ರ ಹೆಗಡೆಯವರೇ ಧೃತಿಗೆಡಬೇಡಿ ನಿಮ್ಮ ಹಿಂದೆ ಲಕ್ಷಾಂತರ ಮಂದಿ ಭಕ್ತರಿದ್ದಾರೆ ಎಂದು ನಗರದಲ್ಲಿ ಮಾಜಿ ಸಚಿವ ಎಚ್ ಡಿ ರೇವಣ್ಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರಿಗೆ ಧೈರ್ಯ ತುಂಬಿದ್ದಾರೆ. ಧರ್ಮಸ್ಥಳದ ಬಗ್ಗೆ ಉಂಟಾಗಿರುವ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಅವರು, ಪೂಜ್ಯ ವೀರೇಂದ್ರ ಹೆಗ್ಗಡೆಯವರು ತಮಗೆ ಆಗುತ್ತಿರುವ ಎಲ್ಲಾ ನೋವುಗಳನ್ನು ಬದಿಗಿಟ್ಟು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ ಅವರ ಬಗ್ಗೆ ನಡೆಯುತ್ತಿರುವ ಶಡ್ಯಂತ್ರದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಸಮಾಜದ ಒಳಿತಿಗಾಗಿ ಕೆಲಸ ಮಾಡಿರುವ ವೀರೇಂದ್ರ ಹೆಗ್ಡೆಯವರ ಕುಟುಂಬದಕ್ಕೆ ತೊಂದರೆಯಾದಾಗ ಶ್ರೀ ಮಂಜುನಾಥ ಸ್ವಾಮಿ ಅವರ ನೆರವಿಗೆ ಧಾವಿಸುತ್ತಾನೆ ಎಂದರು.