:ಶಿರಸಿ: ತಾಲೂಕು ಬನವಾಸಿ ಠಾಣಾ ವ್ಯಾಪ್ತಿಯ ದನಗನಹಳ್ಳಿ ಗ್ರಾಮದ ಮಳ್ಳೂರು ರಾಜೇಂದ್ರಗೌಡ್ರು ತಂದೆ ಬಸಪ್ಪ ಗೌಡ್ರು ಎಂಬುವವರು ಕಳೆದ 8 ವರ್ಷಗಳ ಹಿಂದೆ ಮನೆಯಿಂದ ಹೊರ ಹೋದವರು ಇದುವರೆಗೂ ಮನೆಗೆ ಬರದೆ ನಾಪತ್ತೆಯಾಗಿರುವ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ರಿ ವ್ಯಕ್ತಿಯ ಮಗಳು ತನ್ನ ತಂದೆಯನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದು ಬನವಾಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. .