ಸಕಲೇಶಪುರ: ಪಟ್ಟಣದ ಹೊರವಲಯದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಸಾರ್ವಜನಿಕರ ಸಹಕಾರದಿಂದ ಅಗಲಟ್ಟಿ ಬಳಿ ಸೆರೆ ಹಿಡಿದಿದ್ದಾರೆ. ಇಬ್ಬರು ಯುವಕರು ಹಾಗೂ ಇಬ್ಬರು ಮಹಿಳೆಯರನ್ನೊಳಗೊಂಡ ತಂಡವು ದೇವಸ್ಥಾನದ ಹುಂಡಿಯ ಹಣ, ತಾಮ್ರದ ವಸ್ತುಗಳು ಮತ್ತು ಪೂಜಾ ಸಾಮಗ್ರಿಗಳನ್ನು ಕದ್ದೊಯ್ದಿತ್ತು. ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಅವರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದರು.ಪ್ರಾಥಮಿಕ ತನಿಖೆಯಲ್ಲಿ, ವಶಕ್ಕೆ ಪಡೆದ ಗ್ಯಾಂಗ್ ಸದಸ್ಯರು ಅನಾಥಾಶ್ರಮ ನಡೆಸಲು ಹಣ ಮತ್ತು ಬಟ್ಟೆಗಳನ್ನು ದೇಣಿಗೆ ನೀಡುವಂತೆ ಹಳ್ಳಿ-ಹಳ್ಳಿಗಳಿಗೆ ತೆರಳಿ ವಸ್ತುಗಳನ್ನು ಸಂಗ್ರಹಿಸುವ ನಾಟಕವಾಡಿ ಸಾರ್ವಜನಿಕರ ಕಣ್ಣಿಗೆ ಮಂಕುಬೂದಿ ಎರಚಿದ್ದಾರೆ.