ಹಳಿಯಾಳ :ತಾಲೂಕು ಮುರ್ಕವಾಡದ ಸಂಜು ಯಲ್ಲಾರಿ ಪಿoಪಳೇಕರ್ ಎಂಬುವವರಿಗೆ ಸೇರಿದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳವು ಮಾಡಿಕೊಂಡು ಹೋಗಿದ್ದ ಆರೋಪಿಯನ್ನು ಹಳಿಯಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ರಾಜ್ಯದ ಅಹಲ್ಯ ನಗರ ಜಿಲ್ಲೆಯ ಶೇಗಾಂವ ತಾಲೂಕಿನ ಚಿಕಣಿ ತಾಂಡದ ನಿವಾಸಿ ರಾಹುಲ್ ಅಶೋಕ ಜಾದವ್ ಎಂಬಾತ ಆರೋಪಿಯಾಗಿದ್ದು ಆತನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ ಈತನು ಕಳುವು ಮಾಡಿಕೊಂಡು ಹೋಗಿದ್ದ ಟ್ರ್ಯಾಕ್ಟರ್ ಹಾಗೂ ಟ್ರೇಲರ್ ಅನ್ನು ಜಪ್ತ ಮಾಡಿಕೊಂಡು ಹಳಿಯಾಳ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.